ಮಲಯಾಳಂ ಚಿತ್ರದಲ್ಲಿ ಕಿಚ್ಚ ಸುದೀಪ್? ‘ಉಯಿರ್’ನಲ್ಲಿ ಅತಿಥಿ ಪಾತ್ರ..!

ಬೆಂಗಳೂರು: ಕನ್ನಡ ಚಿತ್ರರಂಗದ ಸ್ಟಾರ್ ನಟ ಕಿಚ್ಚ ಸುದೀಪ್ ಇದೀಗ ಮಲಯಾಳಂ ಚಿತ್ರರಂಗಕ್ಕೆ ಹೆಜ್ಜೆ ಇಡುತ್ತಿದ್ದಾರೆ ಎನ್ನುವ ಸುದ್ದಿ ಸಿನಿ ವಲಯದಲ್ಲಿ ಕುತೂಹಲ ಮೂಡಿಸಿದೆ. ಮಲಯಾಳಂ ಮಾಧ್ಯಮಗಳ ವರದಿಯಂತೆ, ಸುದೀಪ್ ಈಗಾಗಲೇ ಉಯಿರ್ ಎಂಬ ಮಲಯಾಳಂ ಸಿನಿಮಾದಲ್ಲಿ ನಟಿಸಿದ್ದಾರೆ.

‘ಉಯಿರ್’ ಒಂದು ಮರ್ಡರ್ ಮಿಸ್ಟರಿ ಥ್ರಿಲ್ಲರ್ ಚಿತ್ರವಾಗಿದ್ದು, ಮಲಯಾಳಂನ ಪ್ರತಿಭಾವಂತ ನಟ ರೋಷನ್ ಮ್ಯಾಥೀವ್ ಈ ಸಿನಿಮಾದ ನಾಯಕ. ಸುದೀಪ್ ಅವರು ಕಥೆಗೆ ಮಹತ್ವದ ತಿರುವು ನೀಡುವ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಚಿತ್ರದ ಮೂಲಕವೇ ಸುದೀಪ್ ಮಲಯಾಳಂ ಸಿನಿರಂಗಕ್ಕೆ ಅಧಿಕೃತ ಪ್ರವೇಶ ಪಡೆಯುತ್ತಿದ್ದಾರೆ.

ಈ ಸಿನಿಮಾ ಜೂನ್ 26 ರಂದು ಬಿಡುಗಡೆಯಾಗಲು ಸಜ್ಜಾಗಿದೆ. ‘ಜೋಸೆಫ್’ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ಪದ್ಮಕುಮಾರ್ ಅವರು ‘ಉಯಿರ್’ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ.

ಇನ್ನು ಸುದೀಪ್ ಅವರ ಕನ್ನಡ ಸಿನಿಮಾಗಳ ವಿಚಾರಕ್ಕೆ ಬಂದರೆ, ‘ಬಿಲ್ಲಾ ರಂಗ ಭಾಷಾ’ ಚಿತ್ರದ ಚಿತ್ರೀಕರಣ ಪ್ರಗತಿಯಲ್ಲಿದ್ದು, ಇದರೊಂದಿಗೆ ಇನ್ನೂ ಎರಡು ಸಿನಿಮಾಗಳಿಗೆ ಸುದೀಪ್ ಒಪ್ಪಿಗೆ ನೀಡಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.

Leave a Reply

Your email address will not be published. Required fields are marked *